ಚಿತ್ರ: ಝಾನ್ಸಿ ಐ.ಪಿ.ಎಸ್ 
ಸಾಹಿತ್ಯ: ಮಹೇಶ್ ಮಹದೇವ್
ಸಂಗೀತ: ಎಂ.ಎನ್.ಕೃಪಾಕರ್
ಗಾಯನ: ಪ್ರಿಯದರ್ಶಿನಿ

ಪಲ್ಲವಿ

ಅನುರಾಗದ ಅಲೆಯಲಿ ಇದ್ದೆನು ನಾನು
ಅನುಬಂಧದ ಸೆಲೆಯಲಿ ಬೆಳೆದೆನು ನಾನು
ಏಕಂಗಿ ಜೀವನವಿಂದ ನಾನದಾಗಿದೆ
ಯಾರು ಇಲ್ಲದ ಈ ಬದುಕು ಸಾಕಾಗಿದೆ 
ಉಸಿರು ಬಿಗಿದಂತಿದೆ
ಅನುರಾಗದ ಅಲೆಯಲಿ ಇದ್ದೆನು ನಾನು

ಚರಣ-೧

ಮರೆಯದ ಮಾಣಿಕ್ಯ ಅಪ್ಪನು
ಮಮತೇಯ ಕಡಲು ತಾಯಿಯು
ತಂಗಿಯ ಪ್ರೀತಿಯ ವಾತ್ಸಲ್ಯ
ಕಳಕೊಂಡೆ ಎಲ್ಲಾ ಬಾಂಧವ್ಯ
ಯಾರ ಶಾಪಾವೊ ಕಾಣೆ ನನ್ನ ವೇದನೆ
ದೇವರಾ ಲೀಲಿಯೊ ಕಾಣೆ ಈ ಪ್ರೇರಣೆ
ಸಿಡಿಲು ಬಡಿದಂತಿದೆ
ಅನುರಾಗದ ಅಲೆಯಲಿ ಇದ್ದೆನು ನಾನು

ಚರಣ- ೨
ಯಾರಿಗೆ ಹೇಳಲಿ ನನ್ನ ನೋವು
ನನ್ನವರು ಇಲ್ಲದ ಈ ಬಾಳು
ಮುಳ್ಳಿನ ಹಾದಿಯ ಈ ಬದುಕು
ಕ್ಷಣ ಕ್ಷಣ  ಬಾಳಲಿ ಹೊಸ ಬಿರುಕು
ಏಕಾಂಗಿ ಜೀವನವಿಂದು ನಾನದಾಗಿದೆ
ಯಾರು ಇಲ್ಲದ ಈ ಜಗವು ಸಾಕಾಗಿದೆ
ಉಸಿರು ಬಿಗಿದಂತಿದೆ
ಅನುರಾಗದ ಅಲೆಯಲಿ ಇದ್ದೆನು ನಾನು

category: ಝಾನ್ಸಿ ಐ. ಪಿ. ಎಸ್ ಚಿತ್ರ
category: ಕನ್ನಡ ಚಿತ್ರಸಾಹಿತ್ಯ
ವರ್ಗ: ಚಲನಚಿತ್ರಗಳು
ವರ್ಗ: ಮಹೇಶ್ ಮಹದೇವ್ ಸಾಹಿತ್ಯ
ವರ್ಗ: ಪ್ರಿಯದರ್ಶಿನಿ ಗಾಯನ